ಪ್ರಶಂಸನಾ ಬರವಣಿಗೆಗಳು

"ಉತ್ತಮ ಶಿಕ್ಷಕರು ಉತ್ತಮ ಬಾಂಧವ್ಯ ಮತ್ತು ಸ್ನೇಹಯುತ ಸಂಪರ್ಕದ ಮೇಲೆ ತಮ್ಮ ದೃಷ್ಟಿಕೋನವನ್ನು ಕೇಂದ್ರಿಕರಿಸುತ್ತಾರೆ”. ನನಗೆ ಅಂಕುರ್ ಜೊತೆಗಿನ ಒಡನಾಟ ಪ್ರಾರಂಭವಾಗಿ ಸುಮಾರು 5 ವರ್ಷಗಳು ಕಳೆದಿವೆ. ಅಲ್ಲದೇ ನನಗೊಂದು ಒಳ್ಳೆಯ ಅನುಭವ ನೀಡಿದೆ. ಅಂಕುರ್ ಮುಂದಿನ ಯುವ ಪೀಳಿಗೆಗೆ ಒಂದು ಅತ್ಯುತ್ತಮ ಕಲಿಕೆಯ ವೇದಿಕೆಯಾಗಿದೆ. ಮಕ್ಕಳಿಗೆ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಮುಕ್ತ ವಾತಾವರಣವನ್ನು ಒದಗಿಸುವ ಸಂಸ್ಥೆಯಾಗಿದೆ. ಅಲ್ಲದೆ ಮಕ್ಕಳು ತಮ್ಮ ಸೃಜನಾತ್ಮಕ ಕೌಶಲ್ಯ ಮತ್ತು ಜ್ಞಾನವನ್ನು ವೃದ್ಧಿಗೊಳಿಸಲು ಒಂದು ಪೂರಕವಾದ ವಾತಾವರಣ ಕಲ್ಪಿಸುವುದಲ್ಲದೇ, ಉತ್ತಮ ಮೂಲಭೂತ ಸೌಕರ್ಯ, ಸ್ವತಂತ್ರ ಮನೋಭಾವನೆ ಮತ್ತು ವಾತ್ಸಲ್ಯ ಪೂರ್ಣ ಆರೈಕೆಯ ಸಂಸ್ಥೆಯಾಗಿದೆ. ಸಂಹಿತಾ ಶಾಲೆಯ ಶಿಕ್ಷಕಿಯಾಗಿ ಅಂಕುರ್ ನ ನಿವಾಸಿ ಶಿಕ್ಷಕಿಯಾಗಿ, ಸಂಸ್ಥೆಯ ಭಾಗವಾಗಿ ಇಲ್ಲಿರುವ ಮಕ್ಕಳೊಂದಿಗೆ ಕೆಲಸ ಮಾಡುತ್ತಿರುವುದು ಒಂದು ಉತ್ತಮ ಅನುಭವವನ್ನು ನೀಡುತ್ತಿದೆ. ನನಗೆ ಅಂಕುರ್ ನ ಪ್ರಯಾಣದ ಭಾಗವಾಗಲು ಅವಕಾಶ ನೀಡಿದ ಸಂಪೂರ್ಣ ಸಮುದಾಯಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಎಲ್ಲಾ ಸಾಮರ್ಥ್ಯದೊಂದಿಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ."

ಅದ್ವೈತ್ ಫೌಂಡೇಶನ್‌ನ ಭಾಗವಾಗಲು ನನಗೆ ಅತ್ಯಂತ ಸುಯೋಗವಾಗಿದೆ ಮತ್ತು ಅತಿವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯ ಬೆಳವಣಿಗೆಯನ್ನು ಪ್ರತ್ಯಕ್ಷವಾಗಿ ನೋಡುತ್ತಾ ಬಂದಿದ್ದೇನೆ. ಸುಮಾರು 14 ವರ್ಷಗಳಿಂದ ಮಕ್ಕಳೊಂದಿಗಿದ್ದು, ಸಾಕಷ್ಟು ವಿಷಯಗಳನ್ನು ಕಲಿಸುವುದರ ಜೊತೆಗೆ ಒಬ್ಬ ಸ್ವಯಂ ವಿದ್ಯಾರ್ಥಿಯಾಗಿ ಕಲಿಕೆಯ ಭಾಗವಾಗಿದ್ದೆನು. ಅಲ್ಲದೇ ನನ್ನ ಮಗನು ಸಹ ಸಂಹಿತಾ ಶಾಲೆಯಲ್ಲಿ ಅವನ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸ್ವೀಕಾರ, ಸೇರ್ಪಡೆ, ನೀತಿ ನಿಯಮಗಳು ಮತ್ತು ಅಸಂಖ್ಯಾತ ಮೌಲ್ಯಗಳ ಪರವಾಗಿ ಸದಾ ಸಂಸ್ಥೆಯು ನಿಂತಿರುವುದು ಪ್ರಶಂಸನೀಯ. ಪ್ರತಿವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಪದವೀಧರರಾಗಿ ತೇರ್ಗಡೆಯಾಗುತ್ತಿರುವುದನ್ನು ನೋಡುವುದೇ ಒಂದು ಆನಂದದ ಸಂಗತಿ ಅಲ್ಲದೇ ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.

ಅಂಕುರ್ ಬಗ್ಗೆ ನಾನು ಇಷ್ಟ ಪಡುವ ಸಂಗತಿಯೆಂದರೆ ಇಲ್ಲಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಯ ಅನನ್ಯ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಇದು ಸಂಸ್ಥೆಯು ಮಕ್ಕಳಿಗಾಗಿ ಯಾವ ರೀತಿ ಶ್ರಮಿಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.

ಅಂಕುರ್ ಒಂದು ಅದ್ಭುತ ಸಂಸ್ಥೆಯಾಗಿದೆ. ನಾನು ಅಲ್ಲಿ ಕಳೆದ 6 ವಾರಗಳಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ನನಗೆ ಸಾಕಷ್ಟು ಮಕ್ಕಳೊಂದಿಗೆ ಕೆಲಸ ಮಾಡಿದ ಅನುಭವವಿದೆ. ಆದರೆ ಈ ಸಂಸ್ಥೆಯ ಮಕ್ಕಳು ಹೃದಯಕ್ಕೆ ಹತ್ತಿರವಾಗಿದ್ದರು. ನಾನು ಗಮನಿಸಿದ ಹಾಗೆ ಇಲ್ಲಿರುವ ಮಕ್ಕಳು ಬುದ್ಧಿವಂತಿಕೆ, ದಯೆ ಮತ್ತು ಉತ್ಸುಕತೆಯಲ್ಲಿ ಒಬ್ಬರಿಗಿಂತ ಒಬ್ಬರು ತುಂಬಾ ಆಕರ್ಷಕವಾಗಿ ಕಾಣುತ್ತಾರೆ. ಸ್ವಲ್ಪವೂ ಕಲ್ಮಶವಿಲ್ಲದ ಶುದ್ಧ ಮನಸ್ಸು ಅವರದಾಗಿದೆ. ನಾನು ಮಕ್ಕಳೊಂದಿಗೆ ಆಟವಾಡುತ್ತಾ, ಕಲಿಸುತ್ತಾ ಕಳೆದ ಸಮಯವು ಸಂಜೆ ಮಲಗುವಾಗ ಮನಸ್ಸಿಗೆ ಸಾಕಷ್ಟು ತೃಪ್ತಿ ನೀಡುತ್ತಿತ್ತು.

ನನಗೆ ಅಂಕುರ್ ಮಕ್ಕಳ ಜೊತೆಗೆ ಕೆಲಸಮಾಡುವ ಒಂದು ಅದ್ಭುತ ಅವಕಾಶ ದೊರಕಿತು. ಇಲ್ಲಿನ ಮಕ್ಕಳು ನಂಬಲಸಾಧ್ಯವಾದ ತುಂಬಾ ತೇಜಸ್ಸಿನಿಂದ ಕೂಡಿದ ಗುಣವನ್ನು ಹೊಂದಿದ್ದಾರೆ. ಸಂಸ್ಥೆಯು, ಮಕ್ಕಳಿಗೆ ಆಟವಾಡುತ್ತಾ ಕಲಿಯಲು ನೀಡಿದ ಉತ್ತಮ ಅವಕಾಶ ನಿಜವಾಗಲೂ ಪ್ರಶಂಸನೀಯ. ಅಂಕುರ್, ಮಕ್ಕಳ ಸೃಜನಾತ್ಮಕ ಕಲಿಕೆ ಮತ್ತು ಭಾವಾನಾತ್ಮಕ ಮನೋಭಾವನೆಗಳನ್ನು ಪೋಷಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ.

ನನಗೆ ಅಂಕುರ್ ಒಂದು ಕುಟುಂಬವಾಗಿದೆ. ಮಕ್ಕಳು ಮತ್ತು ಶಿಕ್ಷಕರು ಸಹಬಾಳ್ವೆಯಿಂದ ವಾಸಿಸುತ್ತಾರೆ. ಇದು ಮಕ್ಕಳ ಮತ್ತು ಶಿಕ್ಷಕರ ನಡುವೆ ಉತ್ತಮವಾದ ಬಾಂಧವ್ಯವನ್ನು ರೂಪಿಸಿದೆ.

ಅಂಕುರ್ ನಲ್ಲಿ ಪ್ರತಿಯೊಬ್ಬರೂ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ ನಾನು ಎಲ್ಲಿಯೂ ನೋಡದ, ಬೇರೆಡೆ ಎಲ್ಲಿಯೂ ಸಿಗದ ಒಂದು ಧನಾತ್ಮಕ ಶಕ್ತಿಯನ್ನು ಈ ಸಂಸ್ಥೆಯಲ್ಲಿ ಕಂಡುಕೊಂಡೆನು.