




ನಮ್ಮ ಸಂಸ್ಥಾಪಕರು
“ಶಿಕ್ಷಣವು ಬಲಿಷ್ಠ ಮತ್ತು ಪ್ರಗತಿಪರ ರಾಷ್ಟ್ರವನ್ನು ರೂಪಿಸುವ ಕೀಲಿಯಾಗಿದೆ. ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಜ್ಞಾನವನ್ನು ಶಿಕ್ಷಣದ ಮೂಲಕ ನೀಡುತ್ತವೆ. ಇಂತಹ ಶಿಕ್ಷಣವು ಮುಂಬರುವ ಪೀಳಿಗೆಗೆ ಅವರ ಭವಿಷ್ಯಕ್ಕೆ ಭದ್ರ ಅಡಿಪಾಯವನ್ನು ಹಾಕುತ್ತದೆ. ಶಿಕ್ಷಣಕ್ಕೆ ನಮ್ಮ ಮನಸ್ಥಿತಿಯನ್ನು ರೂಪಿಸುವ ಸಾಮರ್ಥ್ಯವಿದೆ ಮತ್ತು ಉತ್ತಮವಾದದ್ದನ್ನು ಕಂಡುಕೊಳ್ಳಲು ಸವಾಲುಗಳನ್ನು ಎದುರಿಸಿ ಅವರಿಗೆ ಬೇಕಾದ ಮಾರ್ಗದರ್ಶನ ನೀಡುವ ಶಕ್ತಿಯನ್ನು ಹೊಂದಿದೆ. ಇದರಿಂದ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳಲು , ಸಮಾಜದ ಬೆಳವಣಿಗೆಯನ್ನು ವೇಗಗೊಳಿಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ,ಶಿಕ್ಷಣವು ನಮ್ಮಲ್ಲಿ ಅಡಗಿರುವ ಅಜ್ಞಾನದ ಅಂಧಕಾರದ ಮಿತಿಗಳಿಂದ ಮುಕ್ತಗೊಳಿಸುತ್ತದೆ.ರಾಷ್ಟ್ರದ ಪ್ರತಿ ಮಗುವಿಗೂ ಆತನ ಹೃದಯದಲ್ಲಿ ಅಡಗಿರುವ ಆಲೋಚನೆಗಳಿಗೆ ಶಿಕ್ಷಣದ ಹಕ್ಕನ್ನು ನೀಡಬೇಕು ಎಂಬ ಕಲ್ಪನೆಯೊಂದಿಗೆ ಅಂಕುರ್ ಉದಯವಾಯಿತು.”

ಅಂಕುರ್ ಎಂದರೇನು?
ಶಿಬುಲಾಲ್ ಫ್ಯಾಮಿಲಿ ಫಿಲಾಂತ್ರೊಪಿಕ್ ಇನಿಶಿಯೇಟಿವ್ಸ್ (SFPI) ಜುಲೈ 2004 ರಲ್ಲಿ ಅಂಕುರ್ ಎಂಬ ಯೋಜನೆಯನ್ನು ಭಾರತದಲ್ಲಿ ವಿವಿಧ ಶೈಕ್ಷಣಿಕ ಲೋಕೋಪಯೋಗಿ ಕಾರ್ಯಕ್ರಮಗಳನ್ನು ಉತ್ತೇಜಿಸಬೇಕೆನ್ನುವ ಪ್ರಮುಖ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಯಿತು
‘ಅಂಕುರ್’ ಎಂದರೆ ಬೆಳೆಯುವ ಸಸಿ. ಉತ್ತಮ ಗುಣಮಟ್ಟದ ಶಿಕ್ಷಣವು ಎಲ್ಲಾ ಅಭಿವೃದ್ದಿಯ ಮೂಲಧಾರ ಎಂಬ ದೃಢ ವಿಶ್ವಾಸದಿಂದ ಅಂಕುರ್ ರೂಪುಗೊಂಡಿತು. ಅಂಕುರ್ ನ ವಿವಿಧ ಕಾರ್ಯಕ್ರಮಗಳು ಸಮಾಜದ ಅನೇಕ ವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಈ ಮೂಲಕ ಅಂಕುರ್‌ಗೆ ದಾಖಲಾದ ನಂತರ ಮಗುವಿನ ಶಾಲಾ ಪ್ರಕ್ರಿಯೆಯ ಪ್ರಯಾಣದಲ್ಲಿ ಸ್ಥಿರ ಹಾಗು ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುತ್ತದೆ.
ಪ್ರತಿ ಮಗುವಿಗೂ ಶಿಕ್ಷಣದ ಹಕ್ಕು ಇದೆ ಎಂದು ನಾವು ಬಲವಾಗಿ ನಂಬುತ್ತೇವೆ. ಶಿಕ್ಷಣವು ನಮ್ಮ ಮನಸ್ಸನ್ನು ಶ್ರೀಮಂತಗೊಳಿಸುತ್ತದೆ, ಚಾರಿತ್ರ್ಯವನ್ನು ನಿರ್ಮಿಸುತ್ತದೆ ಹಾಗೂ ನಮ್ಮ ಜ್ಞಾನದ ಪರಿದಿಯನ್ನು ವಿಸ್ತರಿಸುತ್ತದೆ. ಜೀವನದ ವಿವಿಧ ಹಂತಗಳಲ್ಲಿರುವ ಮಕ್ಕಳಿಗೆ ಶಿಕ್ಷಣವು ದೊರಕುವ ಹಾಗೆ ಮಾಡುವುದು ಈ ಪ್ರತಿಷ್ಠಾನದ ಧ್ಯೇಯವಾಗಿದೆ
ನಮ್ಮ ಗುರಿ
ನಮ್ಮ ದೃಷ್ಟಿ ಕೋನ
ನಮ್ಮ ಮೌಲ್ಯಗಳ ವ್ಯವಸ್ಥೆ: R-CARE
ನಮ್ಮ ಸ್ಪಷ್ಟ ಗುರಿಯ ಕಡೆಗೆ ಸಾಗುವ ಪ್ರಯಾಣದಲ್ಲಿ ನಾವು ಮಾಡುವ ಆಯ್ಕೆಗಳಿಗೆ ಮಾರ್ಗದರ್ಶನ ನೀಡುವುದೇ ನಮ್ಮ ಪ್ರಮುಖ ಮೌಲ್ಯಗಳು ; ನಮ್ಮ ಆರೈಕೆ, ನಮ್ಮ ಕಾಳಜಿ. (R CARE- Our Care! ಎಂದು ಸಂಕ್ಷಿಪ್ತ ರೂಪದಲ್ಲಿ ಬರೆಯಲಾಗಿದೆ ). ನಮ್ಮ ಮೌಲ್ಯಗಳು ನಮ್ಮ ಎಲ್ಲಾ ವಿದ್ಯಾರ್ಥಿಗಳನ್ನು, ನಿರ್ವಾಹಕರನ್ನು ಮತ್ತು ಎಲ್ಲಾ ಸಿಬ್ಬಂದಿವರ್ಗದವರನ್ನು ಒಗ್ಗೂಡಿಸುವ ಸಾಧನವಾಗಿದೆ .
ಗೌರವ
ಗೌರವ
ಸೃಜನಶೀಲತೆ
ಸೃಜನಶೀಲತೆ
ಸಾಧನೆ
ಸಾಧನೆ
ಜವಾಬ್ದಾರಿ
ಜವಾಬ್ದಾರಿ
ಆರೈಕೆ
ಆರೈಕೆ
ಶ್ರೇಷ್ಠತೆ
ಶ್ರೇಷ್ಠತೆ
ನಮ್ಮ ನಾಲ್ಕು ಸ್ತಂಭಗಳು
ಅಂಕುರ್ ನ ಎಲ್ಲಾ ಕಾರ್ಯಕ್ರಮಗಳು ಮತ್ತು ಎಲ್ಲಾ ಪ್ರಯತ್ನಗಳು ನಾಲ್ಕು ಕಂಬಗಳ ನಿಲುವುಗಳ ಸುತ್ತ ಆವೃತ್ತಿಯಾಗಿರುತ್ತದೆ

ಸುರಕ್ಷತೆ ಮತ್ತು ಭದ್ರತೆ
ಮಕ್ಕಳಿಗೆ ಎಲ್ಲಾ ಸಮಯದಲ್ಲೂ ಸುರಕ್ಷತೆಯ ಭಾವನೆಯನ್ನು ಮತ್ತು ಪೂರಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಪ್ರಧಾನ ಜವಾಬ್ದಾರಿಯಾಗಿದೆ.

ಭಾವನಾತ್ಮಕ ಯೋಗಕ್ಷೇಮ
ಭಾವನಾತ್ಮಕ ಯೋಗಕ್ಷೇಮವು ದೈಹಿಕ ಮತ್ತು ಅರಿವಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಮಕ್ಕಳ ಭಾವನಾತ್ಮಕ ಕ್ಷೇಮ ಮತ್ತು ಸಂತೋಷವನ್ನು ಖಾತ್ರಿಪಡಿಸುವುದೇ ನಮ್ಮ ಕೇಂದ್ರೀಕೃತ ವಿಧಾನವಾಗಿದೆ.

ಶೈಕ್ಷಣಿಕ ಬೆಂಬಲ
ಇಂದಿನ ಮಕ್ಕಳ ಸಂಸ್ಕಾರವು ನಮ್ಮ ರಾಷ್ಟ್ರದ ಮುಂದಿನ ಸಹಾಯದಾಯಕ ಪ್ರಜೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಮಕ್ಕಳಲ್ಲಿ ಶೈಕ್ಷಣಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳನ್ನು ನಿರ್ಮಿಸಲು ನಾವು ಭದ್ರವಾದ ಅಡಿಪಾಯವನ್ನು ಹಾಕುತ್ತೇವೆ. ಶಿಕ್ಷಣವನ್ನು ಮಕ್ಕಳಿಗೆ ಸಾಧಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುವು ಮಾಡಿಕೊಡುವುದಲ್ಲದೆ ನಾಳೆಯ ನೈಜ ಜಗತ್ತನ್ನು ಪ್ರಾರಂಭಿಸಲು ಅವರನ್ನು ಸಿದ್ಧಪಡಿಸುತ್ತೇವೆ.

ವ್ಯಕ್ತಿತ್ವ ವಿಕಸನ
ಸಮೃದ್ಧ ಮತ್ತು ಸಕ್ರಿಯವಾದ ಪರಿಸರವನ್ನು ಒದಗಿಸಲು ನಾವು ಮಕ್ಕಳೊಂದಿಗೆ ನಮ್ಮ ಸಂವಹನ ಕೌಶಲ್ಯವನ್ನು ವಿನ್ಯಾಸಗೊಳಿಸುತ್ತೇವೆ. ಹಾಗು ಸಾಮಾಜಿಕ, ವಿಮರ್ಶಾತ್ಮಕ ಚಿಂತನೆಯ ಮೂಲಕ, ತಂಡದಲ್ಲಿ ಸಹಕಾರ ಮನೋಭಾವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದಯೆ, ಸಹಾನುಭೂತಿ ಮತ್ತು ವಿನಮ್ರತೆಯನ್ನು ಹೊಂದಿರುವ ಜವಾಬ್ದಾರಿಯುತ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳಲು ಮಕ್ಕಳನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ.
ನಮ್ಮ ವಿಧಾನ
ನಿಯಮಿತ ಸಭೆಗಳೊಂದಿಗೆ ವೃತ್ತಿಪರವಾಗಿ ನಡೆಸಲ್ಪಡುವ ಮತ್ತು ಪ್ರಕ್ರಿಯೆ ಚಾಲಿತವಾದ ಅಂಕುರ್ ಒಂದು ಭಿನ್ನವಾದ ಸಂಸ್ಥೆಯಾಗಿದೆ . ಎಲ್ಲಾ ಪ್ರಕ್ರಿಯೆಗಳನ್ನು ವಿವರವಾಗಿ ಮತ್ತು ಉತ್ತಮವಾಗಿ ದಾಖಲಿಸಲ್ಪಟ್ಟಿದೆ. ಎಲ್ಲಾ ವಿತ್ತೀಯ ವಹಿವಾಟುಗಳು ಪಾರದರ್ಶಕವಾಗಿರುತ್ತವೆ ಮತ್ತು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತಿ ಮಗುವಿನ ಶೈಕ್ಷಣಿಕ, ವೈದ್ಯಕೀಯ ಮತ್ತು ಪಠ್ಯೇತರ ದಾಖಲೆಗಳಿಗಾಗಿ, ನಡವಳಿಕೆಯ ಮಾದರಿಗಳು ಮತ್ತು ವರದಿಗಳ ವಿಚಾರಗಳು ವಿವರವಾದ ಕಡತಗಳಲ್ಲಿ ನಿರ್ವಹಿಸಲಾಗುತ್ತದೆ.


ನಮ್ಮ ಸಂಸ್ಕೃತಿ
ಮಕ್ಕಳಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಲು ಮತ್ತು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ವಸತಿಗೃಹದಲ್ಲಿ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತದೆ. ಎಲ್ಲಾ ಧರ್ಮಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಮತ್ತು ಮಕ್ಕಳು ತಮ್ಮ ಹೆತ್ತವರ ಧರ್ಮವನ್ನು ಅನುಸರಿಸಲು ಮುಕ್ತರಾಗಿದ್ದಾರೆ. ನೈತಿಕತೆ ಮತ್ತು ಮೌಲ್ಯಗಳನ್ನು ಕಥೆಗಳ ಮೂಲಕ ಕಲಿಸಲಾಗುತ್ತದೆ. ಸ್ವಸ್ಥ ವಾತಾವರಣದಲ್ಲಿ ಈ ಮೌಲ್ಯಗಳನ್ನು ಬಲಪಡಿಸಲು ಮನರಂಜನಾ ಕೇಂದ್ರದಲ್ಲಿ ಸಾಪ್ತಾಹಿಕ ಕಾರ್ಯಕ್ರಮಗಳಲ್ಲಿ ಮಕ್ಕಳಿಂದ ನಾಟಕಗಳನ್ನು ರೂಪಿಸಲಾಗುತ್ತದೆ.
ಇಲ್ಲಿಯವರೆಗಿನ ಅಂಕುರ್ ನ ಪ್ರಯಾಣ
ಇಲ್ಲಿಯವರೆಗಿನ ಅಂಕುರ್ ನ ಪ್ರಯಾಣ
ಗುಣಮಟ್ಟದ ಶಿಕ್ಷಣವು ಸಮಾಜದ ಎಲ್ಲಾ ಅಭಿವೃದ್ಧಿಯ ಪ್ರಗತಿಯ ಮೂಲಾಧಾರವಾಗಿದೆ ಎಂಬ ನಂಬಿಕೆಯಿಂದ ಹುಟ್ಟಿದ , ಸಂಸ್ಥೆಯು ಜುಲೈ 2004 ರಲ್ಲಿ ನೋಂದಾವಣೆಗೊಂಡಿತು. ಈ ಸಂಸ್ಥೆಯು ಭಾರತದ, ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿದೆ. ಈ ಸಂಸ್ಥೆಯ ಉದ್ದೇಶ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪರೋಪಕಾರಿ ಪ್ರಯತ್ನಗಳನ್ನು ಉತ್ತೇಜಿಸುವುದಾಗಿದೆ.
ಇದು ಹಿಂದುಳಿದ ವರ್ಗದ ಮಕ್ಕಳಿಗಾಗಿ ಸಮಗ್ರ ವಸತಿ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡುವ ಯೋಜನೆಯಾಗಿದೆ. ಅಂಕುರ್ ಯೋಜನೆಯನ್ನು ಸಂಹಿತಾ ಅಕಾಡೆಮಿ ಶಾಲೆಯೊಂದಿಗೆ, ಆರ್ಥಿಕವಾಗಿ ಸವಲತ್ತು ಹೊಂದಿರುವ ಹಿನ್ನೆಲೆಯಿಂದ ಬಂದ ಮಕ್ಕಳ ಸಮನ್ವಯದ ಮೂಲಕ ಅಂತರ್ಗತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಅಂಕುರ್ ಈ ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ:
- ಸಂಹಿತಾ ಅಕಾಡೆಮಿ ಶಾಲೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ವಸತಿ ಗೃಹ.
- ಇತರ ಶಾಲೆಗಳಲ್ಲಿ ಮತ್ತು ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲವನ್ನು ವಿಸ್ತರಿಸಲಾಗಿದೆ
- ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಇತರ ಸೌಲಭ್ಯಗಳ ಬೆಂಬಲವನ್ನು ನೀಡಲಾಗುತ್ತದೆ

ಅಂಕುರ್ ಹಳೆಯ ವಿದ್ಯಾರ್ಥಿಗಳ ಮಾತುಗಳಲ್ಲಿ


