ನಿರಂತರವಾಗಿ ಬೆಳೆಯುತ್ತಿರುವ ಅಂಕುರ್ ಕುಟುಂಬದ ಭಾಗವಾಗಿರಿ.
ಸ್ವಯಂ ಸೇವಕ – ನಿಮ್ಮ ಸಮಯ ಮತ್ತು ಪ್ರತಿಭೆ ಇನ್ನೊಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು
ಜೀವನದಲ್ಲಿ ಹೊಸ ಭರವಸೆಗಳನ್ನು ಹೊತ್ತು ಬಂದಿರುವ ಈ ಮಕ್ಕಳಲ್ಲಿ ಹೊಸಬೆಳಕನ್ನು ಮೂಡಿಸಲು ಪ್ರತಿಯೊಬ್ಬರೂ ನಮ್ಮ ಜೊತೆಯಾಗಿ ಬನ್ನಿ. ವಿದ್ಯಾರ್ಥಿಗಳು. ಶಿಕ್ಷಕರು, ಕಾರ್ಯನಿರ್ವಾಹಕರು, ವೃತ್ತಿಪರರು, ನಿವೃತ್ತಿಯ ನಂತರವೂ ಸೇವೆ ಮಾಡಬಯಸುವವರು ಮತ್ತು ಗೃಹಿಣಿಯರು ಅಂಕುರ್ ಸಂಸ್ಥೆಯ ಜೊತೆ ಕೈ ಜೋಡಿಸಿ. ನಿಮ್ಮ ನೈಪುಣ್ಯತೆ, ಕೌಶಲ್ಯ ಮತ್ತು ಪ್ರತಿಭೆಯು ನಮಗೆ ಅಗತ್ಯವಿದೆ. ಒಂದು ಉತ್ತಮ ಧ್ಯೇಯವನ್ನು ಇಟ್ಟುಕೊಂಡು ಅಂಕುರ್ ಸಂಸ್ಥೆಯನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಮತ್ತು ಹೊಸ ಭರವಸೆಗಳನ್ನು ಇಟ್ಟುಕೊಂಡು ಜೀವನ ರೂಪಿಸಿಕೊಳ್ಳುವ ಮುಗ್ಧ ಮನಸ್ಸುಗಳ ಕನಸುಗಳನ್ನು ಸಾಕ್ಷಾತ್ಕರಿಸಲು ನಿಮ್ಮೆಲ್ಲರ ಅಗತ್ಯ ನಮಗಿದೆ. ಅರೆಕಾಲಿಕ ಸ್ವಯಂ ಸೇವಕರು ಅಥವಾ ನಿವಾಸಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವ ಅಕಾಂಕ್ಷಿಗಳು ನಮ್ಮನ್ನು ಸಂಪರ್ಕಿಸಬಹುದಾಗಿದೆ.ನೀವು ಈ ಕೆಳಗಿನವುಗಳಲ್ಲಿ ತೊಡಗಿಸಿಕೊಳ್ಳ ಬಹುದು.
- ಹೊಸ ಪ್ರವೇಶ ಪಡೆದವರ ಬೋಧನೆ/ಮನೆಪಾಠ
- ಶಾಲೆಯ ಬೋಧನೆಯ ನಂತರದ ಕಲಿಕೆಯಲ್ಲಿ ಸಹಾಯ.
- ನೈತಿಕತೆ ಮತ್ತು ಮೌಲ್ಯಗಳ ಮೇಲೆ ಕೇಂದ್ರಿಕರಿಸುವ ಕಥೆಗಳನ್ನು ಹೇಳುವುದು
- ಮಕ್ಕಳನ್ನು ಸಂಜೆ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು
- ಮಕ್ಕಳು/ಸಿಬ್ಬಂದಿಗಳಿಗಾಗಿ ಇಂಗ್ಲೀಷ್ ತರಗತಿಗಳನ್ನು ಆಯೋಜಿಸಬಹುದು.
- ರಜಾದಿನಗಳಲ್ಲಿ ವಿನೋದಮಯ ಶಿಬಿರಗಳನ್ನು ಆಯೋಜಿಸಿ ವಾರಾಂತ್ಯದಲ್ಲಿ ಹೆಚ್ಚುವರಿ ಪಠ್ಯಕ್ರಮದ ಚಟುವಟಿಕೆಗಳನ್ನು (ಕರಕುಶಲ, ಚಿತ್ರಕಲೆ, ಸಂಗೀತ) ಕಲಿಸುವುದು.
- ವಿದ್ಯಾರ್ಥಿಗಳೊಂದಿಗೆ ಹಬ್ಬಗಳನ್ನು ಆಚರಿಸಬಹುದು
- ಶೈಕ್ಷಣಿಕ ವಿಹಾರಕ್ಕೆ ಸಂಬಂಧಿಸಿದ ಪ್ರವಾಸಗಳನ್ನು ಆಯೋಜಿಸಬಹುದು

ನಿವಾಸಿ ಸ್ವಯಂಸೇವಕರ ಕಾರ್ಯಕ್ರಮಕ್ಕಾಗಿ ನಾವು ಅರ್ಜಿಗಳನ್ನು ಆಹ್ವಾನಿಸುತ್ತೇವೆ. ಬಂದು ಮಕ್ಕಳೊಂದಿಗೆ ಸಮಯ ಕಳೆಯಿರಿ ಮತ್ತು ನಮ್ಮ ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗವಹಿಸಿ. ನಿಮಗೆ ಆವರಣದಲ್ಲಿರುವ ಖಾಸಗಿ ವಸತಿ ಮತ್ತು ಉಪಹಾರ ಕೇಂದ್ರದ ಎಲ್ಲಾ ರುಚಿಕರ ಊಟಗಳನ್ನು ಒದಗಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ನೀವು ನೀಡುವ ಸಮಯ ಮತ್ತು ಪ್ರೀತಿಯು ಅವರ ಸಂತೋಷ ಮತ್ತು ಆತ್ಮವಿಶ್ವಾಸಕ್ಕೆ ಒಂದು ದೊಡ್ಡ ಬದಲಾವಣೆಯನ್ನು ತರುತ್ತದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡು ಅವರನ್ನು ಈ ವಲಯಕ್ಕೆ ಆಹ್ವಾನಿಸಿ.
ಈಗ ನೊಂದಣಿ ಮಾಡಿ
ಉದ್ಯೋಗಾವಕಾಶಗಳು
ನಿವಾಸಿ ಶಿಕ್ಷಕರಿಗೆ ಮುಕ್ತ ಅವಕಾಶ.