ಸಾಧನೆಗಳು
ಶಾಲಾ ವಿದ್ಯಾರ್ಥಿಗಳ ಸಾಧನೆಗಳು














ಶಾಲಾ ವಿದ್ಯಾರ್ಥಿಗಳ ಸಾಧನೆಗಳು
ದಿ ಸಂಹಿತಾ ಅಕಾಡೆಮಿಯಲ್ಲಿ ವಿದ್ಯಾರ್ಥಿ ನಾಯಕತ್ವದ ಪಾತ್ರಗಳು: ಏಳು ಅಂಕುರ್ ವಿದ್ಯಾರ್ಥಿಗಳನ್ನು ದಿ ಸಂಹಿತಾ ಅಕಾಡೆಮಿ ವಿದ್ಯಾರ್ಥಿ ಆಡಳಿತ ಮಂಡಳಿಯ ಭಾಗವಾಗಿ ಆಯ್ಕೆ ಮಾಡಲಾಗಿದೆ ಮತ್ತು ಅಂತರ ಶಾಲಾ ಸಾಂಸ್ಕೃತಿಕ ಉತ್ಸವ, ಕಲಾಕೃತಿಯಲ್ಲಿ
- ಕೊಲಾಜ್ ಮೇಕಿಂಗ್ ಸ್ಪರ್ಧೆಯಲ್ಲಿ 1ನೇ ಬಹುಮಾನವನ್ನು ಅಂಕುರ್ ವಿದ್ಯಾರ್ಥಿ ಗೆದ್ದಿದ್ದಾರೆ
- ಸಮೂಹ ನೃತ್ಯ ಸ್ಪರ್ಧೆಯಲ್ಲಿ 2ನೇ ಬಹುಮಾನ ಅಂಕುರ್ ವಿದ್ಯಾರ್ಥಿಗಳು ಪಡೆದಿದ್ದಾರೆ
5 ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಜರ್ನಲ್ ಮೇಕಿಂಗ್ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನವನ್ನು ಅಂಕುರ್ ವಿದ್ಯಾರ್ಥಿಗಳು ಗೆದ್ದಿದ್ದಾರೆ
ಮಾದರಿ ವಿಶ್ವಸಂಸ್ಥೆ (ಎಂ ಯು ಎನ್):
ಮಾದರಿ ವಿಶ್ವಸಂಸ್ಥೆಗಳು ಪ್ರತಿ ವರ್ಷ ನೂರಾರು ಸಾವಿರ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತವೆ, ವಿಶ್ವಸಂಸ್ಥೆಯ ತತ್ವಗಳು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ. ವಿಶ್ವಸಂಸ್ಥೆ ಸ್ವತಃ ಸೇರಿದಂತೆ ಕಾನೂನು, ಸರ್ಕಾರ, ವ್ಯಾಪಾರ ಮತ್ತು ಕಲೆಗಳಲ್ಲಿ ಇಂದಿನ ಅನೇಕ ನಾಯಕರು ಮಾದರಿ ವಿಶ್ವಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿ ಭಾಗವಹಿಸಿದ್ದಾರೆ. ಮಾದರಿ ವಿಶ್ವಸಂಸ್ಥೆಗಳ ಸಮ್ಮೇಳನದಲ್ಲಿ, ವಿದ್ಯಾರ್ಥಿಗಳು ದೇಶ, ಸಂಸ್ಥೆ ಅಥವಾ ವ್ಯಕ್ತಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ ಮತ್ತು ಪ್ರಪಂಚದಾದ್ಯಂತದ ಇತರ ಪ್ರತಿನಿಧಿಗಳೊಂದಿಗೆ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ. ಮಾದರಿ ವಿಶ್ವಸಂಸ್ಥೆಗಳ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ವಿಮರ್ಶಾತ್ಮಕ ಚಿಂತನೆ, ಗುಂಪಿನಲ್ಲಿ ಕೆಲಸ ಮಾಡುವ ಕಲೆ ಮತ್ತು ನಾಯಕತ್ವದ ಜೊತೆಗೆ ಸಂಶೋಧನೆ, ಸಾರ್ವಜನಿಕ ಭಾಷಣ, ಚರ್ಚೆ ಮತ್ತು ಬರವಣಿಗೆಯಂತಹ ಕೌಶಲ್ಯಗಳನ್ನು ಕಲಿಸುತ್ತದೆ. ಬೆಂಗಳೂರಿನ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಅಂಕುರಿನಿಂದ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕ್ರೈಸ್ಟ್ ಅಕಾಡೆಮಿ, ವೈದೇಹಿ ಸ್ಕೂಲ್ ಮತ್ತು ಕ್ಲಾರೆನ್ಸ್ ಹೈಸ್ಕೂಲ್ ಇತ್ಯಾದಿಗಳನ್ನು ಒಳಗೊಂಡಿದೆ.
ಬಾಹ್ಯ ಪರೀಕ್ಷೆಗಳು:
ಟೆರಿ ಒಲಂಪಿಯಾಡ್ ಪರೀಕ್ಷೆ, ವಿದ್ಯಾರ್ಥಿ ವಿಜ್ಞಾನ ಮಂಥನ್ ಪರೀಕ್ಷೆ, ಟ್ಯಾಲೆಂಟೆಕ್ಸ್ ಪರೀಕ್ಷೆ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ-ಗಣಿತ ಕೌಶಲ್ಯ ಪರೀಕ್ಷೆಯಲ್ಲಿ ಅಂಕುರ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಅಂತರ ಶಾಲಾ ಸ್ಪರ್ಧೆಗಳ ಭಾಗವಹಿಸುವಿಕೆ:
- ಎನ್ ಪಿ ಎಸ್, ಜೆಪಿ ನಗರದ ಸಾಂಸ್ಕೃತಿಕ ಉತ್ಸವದಲ್ಲಿ ಡೂಡಲ್ ಆರ್ಟ್ ಸ್ಪರ್ಧೆ, ಅಂಕುರ್ ವಿದ್ಯಾರ್ಥಿ ಭಾಗವಹಿಸಿದ್ದಾರೆ
- ಜಾರ್ಜ್ ಅಸೋಸಿಯೇಷನ್ ಬೆಂಗಳೂರಿನ ಭಾಟಿಯಾ ಶೀಲ್ಡ್‌ಗಾಗಿ ಅಂತರ ಶಾಲಾ ಚರ್ಚಾ ಸ್ಪರ್ಧೆ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ನಡೆಯಿತು, ಅಂಕುರ್ ವಿದ್ಯಾರ್ಥಿ ಭಾಗವಹಿಸಿದ್ದಾರೆ
- ಡಿ ಪಿ ಎಸ್ ಈ -ಸಿಟಿ ಆಯೋಜಿಸಿದ ಸಾಂಸ್ಕೃತಿಕ ಉತ್ಸವ “ಸೃಷ್ಟಿ” ಯಲ್ಲಿ ಅಂಕುರ್ ವಿದ್ಯಾರ್ಥಿ ಗಣಿತ ಜಟಿಲ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ
ಕ್ರೀಡೆ (ಅಂತರ ಶಾಲೆ)
- ವಾಹೆ ಗ್ಲೋಬಲ್ ಅಕಾಡೆಮಿಯಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ 27 ವಿದ್ಯಾರ್ಥಿಗಳು ಅಂಕುರ್ ಅನ್ನು ಪ್ರತಿನಿಧಿಸಿದರು. 13 ವರ್ಷದೊಳಗಿನ ಬಾಲಕರು ಪ್ರಥಮ, ಬಾಲಕಿಯರು ದ್ವಿತೀಯ ಸ್ಥಾನ ಪಡೆದರು. 14 ವರ್ಷದೊಳಗಿನ ವಾಲಿಬಾಲ್ ಬಾಲಕರು ಪ್ರಥಮ ಬಹುಮಾನ ಪಡೆದರು.
- ನ್ಯೂ ಕೇಂಬ್ರಿಡ್ಜ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 15 ವರ್ಷದೊಳಗಿನ ಬಾಲಕರ ವಾಲಿಬಾಲ್ ಪಂದ್ಯಾವಳಿಯನ್ನು ಅಂಕುರ್ ವಿದ್ಯಾರ್ಥಿಗಳು ಗೆದ್ದಿದ್ದಾರೆ.
ಸಿಬಿಎಸ್ಇ ಸಮುದಾಯ ಕ್ರೀಡೆಗಳು:
- ಅಂಕುರ್ ವಿದ್ಯಾರ್ಥಿಗಳು 19 ವರ್ಷದೊಳಗಿನವರ ವಾಲಿಬಾಲ್ ತಂಡದಲ್ಲಿ ಭಾಗವಹಿಸಿ ಎರಡನೆಯ ಸ್ಥಾನ ಪಡೆದು ಹೊರಹೊಮ್ಮಿದರು. ಮಕ್ಕಳು ಮುಂದೆ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಲು ಆಯ್ಕೆಯಾದರು. ಅಂಕುರ್ ವಿದ್ಯಾರ್ಥಿಯು ಉತ್ತಮ ಆಟಗಾರ ಪ್ರಶಸ್ತಿ ಪಡೆದರು .
- ಅಂಕುರ್ 19 ವರ್ಷದೊಳಗಿನ ಫುಟ್ಬಾಲ್ ಬಾಲಕರ ತಂಡದ ವಿದ್ಯಾರ್ಥಿಗಳು ಫೈನಲ್ಗೆ ತಲುಪಿದ್ದಾರೆ. ಅವರು ಮುಂದೆ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಲು ಆಯ್ಕೆಯಾದರು. ಅಂಕುರ್ ವಿದ್ಯಾರ್ಥಿಯು ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿ ಪಡೆದರು.
ರಾಷ್ಟ್ರೀಯ ಮಟ್ಟದ ಕ್ರೀಡೆಗಳು :
ಕೇರಳದಲ್ಲಿ ನಡೆದ ಪಂದ್ಯಾವಳಿಯಲ್ಲಿ ಅಂಕುರ್ ವಿದ್ಯಾರ್ಥಿಗಳು ಫುಟ್‌ಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ತಲುಪುವ ಮೂಲಕ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಅವರವರ ಕಾಲೇಜುಗಳಲ್ಲಿನ ಸಾಧನೆಗಳು




ಅಂಕುರ್ ವಿದ್ಯಾರ್ಥಿಗಳು ಬಹುಮಾನ ಗಳಿಸುವಿಕೆ : (2023 ರಲ್ಲಿ)
ಡಿಸೈನ್ ಟ್ರೋಫಿ, ಫ್ಯಾಶನ್ ಟ್ರೋಫಿ, ಆರ್ಟ್ ಇನ್‌ಸ್ಟಾಲೇಶನ್ ಟ್ರೋಫಿಯನ್ನು ಝೋನಲ್ ಕನ್ವೆನ್ಶನ್‌ನಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಆಫ್ ಆರ್ಕಿಟೆಕ್ಚರ್ (ಎನ್ ಎ ಎಸ್ ಎ) ಎಸ್ ಜೆ ಬಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ ಭಾಗವಹಿಸಲಾಗಿತ್ತು
- ಯು ವಿ ಸಿ ಇ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು ಪಿ ಇ ಎಸ್ ವಿಶ್ವವಿದ್ಯಾಲಯದಿಂದ ವಾರ್ಷಿಕ ರಾಷ್ಟ್ರೀಯ ಕ್ರೀಡಾ ಉತ್ಸವ-INFINI ನಲ್ಲಿ ಭಾಗವಹಿಸಿದ್ದಾರೆ
- ಯು ವಿ ಸಿ ಇ ಆರ್ಕಿಟೆಕ್ಚರ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವುದು ಎಸ್ ಜೆ ಬಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್‌ನಲ್ಲಿ ಆಡಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ .
- ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಫ್ಲೋರ್‌ಬಾಲ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದರು. ಹಾಗೂ ಅತ್ಯುತ್ತಮ ಶೂಟರ್ ಪ್ರಶಸ್ತಿ ಪಡೆದರು.
- ಪ್ರಿ-ಯೂನಿವರ್ಸಿಟಿ ಬೋರ್ಡ್‌ನಿಂದ ರಾಜ್ಯ ಮಟ್ಟದ ಪಿಂಗ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ .
- ಬಿಷಪ್ ಕಾಟನ್ಸ್ ಕ್ರಿಶ್ಚಿಯನ್ ಮಹಿಳಾ ಕಾಲೇಜು ಆಯೋಜಿಸಿದ್ದ ಸೈಕಾಲಜಿ ಫೆಸ್ಟ್‌ನಲ್ಲಿ ಸಮಕಾಲೀನ ನೃತ್ಯ ಪ್ರದರ್ಶನದಲ್ಲಿ ಅಂಕುರ್ ವಿದ್ಯಾರ್ಥಿನಿ ಪ್ರಥಮ ಬಹುಮಾನ ಪಡೆದರು
ಕಾಲೇಜು
- ಮಹಾರಾಣಿಯ ಕ್ಲಸ್ಟರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 1ನೇ ಬಹುಮಾನ ಪಡೆದಿದ್ದಾರೆ.
- ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಆರ್ ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಮಾದರಿ ಯುನೈಟೆಡ್ ನೇಷನ್ಸ್ ನಲ್ಲಿ ಅವರ ತಂಡವು ಅತ್ಯುತ್ತಮ ತಂಡ ಪ್ರಶಸ್ತಿಯನ್ನು ಸ್ವೀಕರಿಸಿದೆ
- ಕರ್ನಾಟಕ ರಾಜ್ಯ ಪಿಯು ಬೋರ್ಡ್ ನಡೆಸಿದ ಅಂತರ ರಾಜ್ಯ ಫ್ಲೋರ್‌ಬಾಲ್ ಪಂದ್ಯಾವಳಿಯಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.