ನೀವೂ ಸಹ ಸಾಧಿಸಬಹುದು!

ಸುಪರ್ಣಾ ಚಟರ್ಜಿ – ಮಾಜಿ ಪ್ರಾಂಶುಪಾಲರು ಅಂಕುರ್

ಜನವರಿ, 2023

ಒಮ್ಮೆ ಒಂದು ಹಳ್ಳಿಯಿಂದ ಒಬ್ಬ ಚಿಕ್ಕ ಹುಡುಗ ಬಂದ. ಆ ಹುಡುಗನದು ಒಂದು ದೊಡ್ಡ ಕುಟುಂಬ. ತಂದೆ-ತಾಯಿ, ಅಜ್ಜ-ಅಜ್ಜಿ, ಚಿಕ್ಕಪ್ಪ -ಚಿಕ್ಕಮ್ಮ ಎಲ್ಲರೂ ಇರುವ ಅವಿಭಕ್ತ ಕುಟುಂಬವಾಗಿತ್ತು. ಆ ಚಿಕ್ಕ ಹುಡುಗನ ತಂದೆ ಆ ಹುಡುಗನ ಬಗ್ಗೆ ಒಂದು ದೊಡ್ಡ ಕನಸನ್ನು ಹೊಂದಿದ್ದರು. ಇದರಿಂದ ಮಗನನ್ನು ದೊಡ್ಡ ನಗರದಲ್ಲಿ ಓದಿಸುವ ಪಣ ತೊಟ್ಟರು. ಆ ನಗರವೇ ಬೆಂಗಳೂರು. ಅದರಲ್ಲೂ ಅಂಕುರ್. ಪ್ರಾರಂಭದಲ್ಲಿ ಯಾವುದೋ ಕುಗ್ರಾಮದಿಂದ ಬಂದ ಈ ಚಿಕ್ಕ ಹುಡುಗನಿಗೆ ತಾನೆಲ್ಲೋ ಕಳೆದು ಹೋಗಿರುವಂತೆ ಭಾಸವಾಯಿತು. ಆದರೆ ಅಂಕುರ್ ಕುಟುಂಬದ ಪ್ರೀತಿ – ವಾತ್ಸಲ್ಯ, ಕಾಳಜಿ ಹುಡುಗನಿಗೆ ತಾಯಿಯ ಮನೆಯಂತೆ ನೆಚ್ಚಿನ ಸ್ಥಳವಾಯಿತು.

ಗಣಿತದಲ್ಲಿ ತುಂಬಾ ನಿಷ್ಣಾತನಾಗಿದ್ದ ಹುಡುಗ, ಟಿಂಕರಿಂಗ್ ಮೂಲಕ ತನ್ನ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ತನಗರಿವಿಲ್ಲದಯೇ ಸಾಕಷ್ಟು ಮುಂದುವರಿದ. ಆದರೆ ಅಂಕುರ್ ಮನೆಯಲ್ಲಿ ಸಿಕ್ಕಿದ ಪ್ರೋತ್ಸಾಹ ತಾನು ಓದುತ್ತಿರುವ ಶಾಲೆಯಲ್ಲಿ ಸಿಗದೇ ದಿನ ಕಳೆದಂತೆ ತನ್ನ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡನು. ಅವನು ಶಾಲೆಯನ್ನು ಮುಂದುವರಿಸಲು ಸಾಧ್ಯವಾಗದ ಸಮಯ ಬಂದಿತು ಮತ್ತು ದೊಡ್ಡ ಕಲಿಕೆಯ ಅಂತರವನ್ನು ಅನುಭವಿಸಿದನು. ಆದ್ದರಿಂದ, ಅವನು ಹೊಸ ಶಾಲೆಗೆ ಹೋದನು.

ಹೊಸ ಶಾಲೆಯಲ್ಲಿ ತನ್ನಂತೆ ಕಲಿಕೆಯಲ್ಲಿ ಕಷ್ಟಪಡುವ ಮಕ್ಕಳನ್ನು ನೋಡಿ ಆಶ್ಚರ್ಯವಾಯಿತು. ಅವನು ಅವರಲ್ಲಿ ಕೆಲವರ ಜೊತೆ ಸ್ನೇಹ ಬೆಳೆಸಿದನು ಮತ್ತು ಕೆಲವು ಕಠಿಣ ಪರಿಶ್ರಮದಿಂದ ಕಲಿಕೆಯ ಎಲ್ಲಾ ಸವಾಲುಗಳನ್ನು ಅವನು ಜಯಿಸಬಹುದೆಂದು ಆರಂಭದಲ್ಲಿ ಅರಿತುಕೊಂಡನು. ಶಾಲೆಯಲ್ಲಿ ಬರುವ ಎಲ್ಲಾ ವಿಷಯಗಳು ಅಂದರೆ ಸಮಾಜ ವಿಷಯದಲ್ಲಿ ಬರುವ ರಾಜರು ಮತ್ತು ರಾಣಿಯರ ಹೆಸರುಗಳು ಅವರ ಅಧಿಕಾರಾವಧಿ, ಗಣಿತ ಮತ್ತು ಭೌತಶಾಸ್ತ್ರದ ಎಲ್ಲಾ ಸೂತ್ರಗಳನ್ನು ನೀರಸವಾಗಿ ಕಲಿಯಲು ಸಾಂಪ್ರದಾಯಿಕ (ಕಂಠ ಪಾಠ ಮಾಡುವ) ಕಲಿಕಾ ವ್ಯವಸ್ಥೆಯು ತುಂಬಾ ಸಹಾಯವಾಗುತ್ತದೆ ಎಂಬುದನ್ನು ಅರಿತನು. ಈ ಕಲಿಕೆಯು ತುಂಬಾ ಬೇಸರ ತರಿಸುವ ಕಲಿಕೆಯಾದರೂ ಕೆಲವೊಂದು ವಿಷಯಗಳಿಗೆ ತುಂಬಾ ಸಹಾಯವಾಗುತ್ತಿತ್ತು. ಕೆಲವು ವರ್ಷದ ನಂತರ ಎನ್.ಐ.ಓ.ಎಸ್ ಪಠ್ಯಕ್ರಮದ ಮುಕ್ತ ಶಾಲೆಗೆ ಪ್ರವೇಶ ಪಡೆದನು. ಈ ಪಠ್ಯಕ್ರಮವು ಸಹ ಇಂತಹ ಮಕ್ಕಳಿಗಾಗಿಯೇ ವಿನ್ಯಾಸ ಮಾಡಲಾಗಿತ್ತು. ತನ್ನ ಸಹಪಾಠಿಗಳೊಂದಿಗೆ ಹೊಸ ಹೊಸ ವಿಷಯಗಳನ್ನು ಕಲಿಯಲು ಹೆಚ್ಚಿನ ಸಮಯವನ್ನು ಕಳೆದನು. ಛಾಯಾಗ್ರಹಣ ಮತ್ತು ಚಿತ್ರಕಲೆ ವಿಷಯಗಳನ್ನು ಕಲಿತನು ಮತ್ತು ಇನ್ನೂ ಕೆಲ ಕಂಪ್ಯೂಟರ್ ವಿಷಯವನ್ನು ಕಲಿಯಲು ಪ್ರಾರಂಭಿಸಿದನು. ಆದರೆ ಈ ಹುಡುಗ ಕಂಪ್ಯೂಟರ್ ಫ್ರೋಗ್ರಾಮ್ ನಲ್ಲಿ ಹೆಚ್ಚು ಆಕರ್ಷಿತನಾಗಿದ್ದ ಸ್ವತ: ತಾನೇ ಕಷ್ಟಪಟ್ಟು ಪೈಥಾನ್ ಪ್ರೋಗ್ರಾಮ್ ಅನ್ನು ಕಲಿತನು. ತುಂಬ ಬೇಗನೇ, ಎನ್.ಐ.ಒ.ಎಸ್ ಪಠ್ಯಕ್ರಮವನ್ನು ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿದನು. ಅಲ್ಲದೇ ಪ್ರಾರಂಭದಲ್ಲಿ ಯಾವ ಶಾಲೆಯಲ್ಲಿ ಕಷ್ಟ ಪಟ್ಟಿದ್ದನೋ ಆ ಶಾಲೆಯಲ್ಲಿ ತನ್ನ 12ನೇ ತರಗತಿ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸದನು.

ನಂತರ ಎಲ್ಲಾ ಒಳ್ಳೆಯ ಕರ್ಮಗಳು ಅವನಿಗೆ ಹಿಂತಿರುಗಲು ಪ್ರಾರಂಭಿಸಿದವು. ಅವನು ಐಐಟಿ ಮದ್ರಾಸ್ ನಲ್ಲಿ ಡೇಟಾ ಸೈನ್ಸ್ ಗೆ ಪ್ರವೇಶ ಪರೀಕ್ಷೆಯನ್ನು ಬರೆದನು ಮತ್ತು ಅವನ ಬೋಧನಾ ಶುಲ್ಕದಲ್ಲಿ ಶೇ 75% ರಷ್ಟು ರಿಯಾಯಿತಿಯ ಜೊತೆಗೆ ಒಂದು ಸ್ಥಾನವನ್ನು ಪಡೆದುಕೊಂಡನು. ಅದೇ ಸಮಯದಲ್ಲಿ ಅವನು ಎಚ್ ಸಿ ಎಲ್ ಕಂಪನಿಯ ಟೆಕ್ ಬೀ ಯ ಪ್ರವೇಶ ಪರೀಕ್ಷೆಯನ್ನು ಸಹ ಬರೆದು ಉತ್ತೀರ್ಣನಾದನು. ಈ ಸಾಧನೆಯು ಅವನಿಗೆ ಪ್ರಸಿದ್ಧ ಐಟಿ ಕಂಪೆನಿಯಾದ ಎಚ್ ಸಿ ಎಲ್ ನಲ್ಲಿ ಸೇರಲು ಸಾಧ್ಯವಾಯಿತು. ನಂತರ ಬಿ.ಐ.ಟಿ.ಎಸ್ ನಲ್ಲಿ ತಮ್ಮ ಬಿ.ಎಸ್ ಪದವಿಗೆ ಪ್ರವೇಶ ಪಡೆದನು. ಮುಂದೆ ಕೆ ಸಿ ಈ ಟಿ ಯಲ್ಲಿ ತೇರ್ಗಡೆಯಾಗಿ ಅರವತ್ತು ಸಾವಿರದ ಸ್ಥಾನವನ್ನು ಪಡೆದಿರುವುದನ್ನು ಉಲ್ಲೇಖಿಸಲೇ ಬೇಕಾಗಿದೆ. ಕೊನೆಗೆ, ಉತ್ತಮ ಅವಕಾಶಗಳನ್ನು ಆಯ್ಕೆ ಮಾಡುವುದೇ ಗೊಂದಲವಾಯಿತು. 

ಇಷ್ಟೆಲ್ಲಾ ಸಾಧನೆ ಮಾಡಿದ ಈ ಹುಡುಗನ ಬಗ್ಗೆ ನನಗೆ ಅಪಾರವಾದ ಗೌರವ ಹಾಗೂ ಹೆಮ್ಮೆ ಇದೆ. ಈ ಹುಡುಗ ಬೇರೆ ಯಾರೂ ಅಲ್ಲ ಅವನೇ ಸತೀಶ್ ಸುಂದರಂ. ಶಹಬ್ಬಾಸ್ ಸತೀಶ್!

 ಅವನನ್ನು ತನ್ನ ಶೈಕ್ಷಣಿಕ ಪಯಣದ ಬಗ್ಗೆ ವಿಚಾರಿಸಿದಾಗ ಅವನು ಈ ರೀತಿ ಹೇಳಿದನು:

  • ನಾನು, ನನ್ನ ಕನಸುಗಳನ್ನು ನಂಬಿಕೊಂಡು ಆತ್ಮಸ್ಥೈರ್ಯದಿಂದ ಮುನ್ನೆಡೆದೆ, ಎಂದಿಗೂ ಕೈ ಬಿಡದೇ ಅದನ್ನು ಸಾಧಿಸಿದೆ.
  • ನಾನು ಡಿಜಿಟಲ್ ಟ್ಯೂಟರಿಂಗ್ ನ ತಂತ್ರವನ್ನು ಕಂಡುಕೊಂಡೆ, ಸ್ವಪ್ರಯತ್ನದಿಂದ ಉತ್ತಮ ಕೌಶಲ್ಯಗಳನ್ನು ಗಳಿಸಿದೆ.