ಸುಪರ್ಣಾ ಚಟ್ಟರ್ಜಿ (ಮಾಜಿ ಪ್ರಾಂಶುಪಾಲರು, ಅಂಕುರ್)
ಕಿಟಾಬ್ಲೆಟ್ ಅಡಿಯಲ್ಲಿ, 29 ನವೆಂಬರ್, 2017 ರಲ್ಲಿ ಬರೆದ ಲೇಖನ
29 November, 2017
ಸಮಗ್ರ ವಸತಿ ಶಿಕ್ಷಣ ಕಾರ್ಯಕ್ರಮವಾದ ಅಂಕುರ್ ನಲ್ಲಿ ನನ್ನ ಕೆಲಸದ ಮೊದಲ ದಿನ, ಸಿಬ್ಬಂದಿಯೊಬ್ಬರು ನನ್ನನ್ನು ಆವರಣದ ಸುತ್ತಲೂ ಕರೆದೊಯ್ದರು, ಆಗ ನಾನು ಆ ದೊಡ್ಡ, ಸುಣ್ಣಬಳಿದ ಕೋಣೆಯನ್ನು ಮೊದಲು ನೋಡಿದೆ. ಅದೊಂದು ಮಕ್ಕಳ ಗ್ರಂಥಾಲಯ. ಅದೊಂದು ಶಾಂತ ಮಧ್ಯಾಹ್ನ ಮತ್ತು ಓರೆಯಾದ ಸೂರ್ಯನ ಬೆಳಕು ಉಷ್ಣತೆಯಿಂದ ಆ ಗೋಡೆಯನ್ನು ತೇವಗೊಳಿಸಿತು ಆದರೆ ಗೋಡೆಯ ವಿರುದ್ಧ ಜೋಡಿಸಲಾದ ಸಾಕಷ್ಟು ಉಕ್ಕಿನ ಕಪಾಟುಗಳೊಂದಿಗೆ ಕೋಣೆಯು ಸರಳವಾಗಿ ಕಾಣುತ್ತಿತ್ತು.
ಮಕ್ಕಳಿಗೆ ಪುಸ್ತಕಗಳನ್ನು ವಿತರಣೆ ಮಾಡಲು ಮತ್ತು ಹಿಂತಿರುಗಿಸಲು ವಾರಕ್ಕೊಮ್ಮೆ ಕೊಠಡಿ ತೆರೆದಿರುತ್ತದೆ ಎಂದು ನಂತರ ನನಗೆ ತಿಳಿಯಿತು. ಸ್ಥಳಾವಕಾಶದೊಂದಿಗೆ ಇನ್ನೂ ಹೆಚ್ಚಿನದನ್ನು ಮಾಡಬಹುದು ಎಂದು ನಾನು ಭಾವಿಸಿದೆ. ಹೆಚ್ಚು ಸಮಯ ವ್ಯರ್ಥ ಮಾಡದೆ, ಕೆಲವು ಸಿಬ್ಬಂದಿಯನ್ನು ಒಟ್ಟುಗೂಡಿಸಿ ಕಪಾಟುಗಳನ್ನು ಜೋಡಿಸಲು ಪ್ರಾರಂಭ ಮಾಡಿದೆ, ಇದರಿಂದ ಕೋಣೆಯಲ್ಲಿ ಹೆಚ್ಚಿನ ಸ್ಥಳವು ಸೃಷ್ಟಿಯಾಯಿತು. ಮುಂದೆ, ನಾವು ಗ್ರಂಥಾಲಯದಲ್ಲಿ ಆಸನಗಳಿಗಾಗಿ ವಸ್ತುಗಳನ್ನು ತರಲು ನಿರ್ಧರಿಸಿದೆವು. ನಾವು ಆವರಣದ ಸುತ್ತಲೂ ಹುಡುಕಿ ಒಂದೆರಡು ಸೋಫಾಗಳು , ದೊಡ್ಡ ಮೇಜುಗಳನ್ನು ತಂದೆವು, ಜೊತೆಗೆ ಮಕ್ಕಳಿಗೆ ಮಲಗಲು ಮತ್ತು ಓದುವಾಗ ವಿಶ್ರಾಂತಿ ಪಡೆಯಲು ಕೆಲವು ಹಾಸಿಗೆಗಳನ್ನು ಸಹ ತಂದೆವು.
ಮುಂದಿನ ಕೆಲವು ದಿನಗಳು ರೋಮಾಂಚನಕಾರಿಯಾಗಿದ್ದವು, ನಾನು ತಂಡದೊಂದಿಗೆ ಸ್ಥಳವನ್ನು ಯೋಜಿಸಲು ಮತ್ತು ಹೊಂದಿಸಲು ಕೆಲಸ ಮಾಡಿದೆ. ಕೋಣೆಯ ಮೂಲೆಯಲ್ಲಿ ಸೋಫಾಗಳನ್ನು ಜೋಡಿಸಿದೆವು ಮತ್ತು ಸ್ನೇಹಶೀಲ ಓದುವ ಸ್ಥಳವನ್ನು ರಚಿಸಿದೆವು. ನಾವು ಪ್ರದರ್ಶನಕ್ಕಾಗಿ ಕೆಲವು ಮೃದುವಾದ ಪ್ರದರ್ಶನ ಫಲಕಗಳನ್ನು ಹಾಕಿ ಪ್ರಶಾಂತವಾಗಿ ಓದಲು ಮತ್ತು ಆಟವಾಡಲು ಹಾಸಿಗೆಗಳನ್ನು ಫಲಕಗಳ ಕೆಳಗೆ ಜೋಡಿಸಿಟ್ಟೆವು.
ನಾವು ಗಾಢ ಬಣ್ಣಗಳಿಂದ ಗೋಡೆಗಳನ್ನು ಚಿತ್ರಿಸಿದೆವು, ಮಕ್ಕಳು ರಚಿಸಿದ ಕೆಲವು ವರ್ಣಚಿತ್ರಗಳನ್ನು ಹಾಕಿದೆವು, ಮೇಜಿನ ಮೇಲೆ ಪುಸ್ತಕಗಳನ್ನು ಹರಡಿದೆವು ಮತ್ತು ಅಂತಿಮವಾಗಿ ಮಕ್ಕಳಿಗಾಗಿ ಗ್ರಂಥಾಲಯದ ಬಾಗಿಲು ತೆರೆಯಲಾಯಿತು.
ಸ್ವಲ್ಪ ಸಮಯದ ನಂತರ, ಕುತೂಹಲದಿಂದ ಮಕ್ಕಳು ಬಾಗಿಲಿನಿಂದ ಇಣುಕಿ ನೋಡಲಾರಂಭಿಸಿದರು. ಕೆಲವರು ಬೋರ್ಡ್ ಆಟಗಳನ್ನು ಎತ್ತಿಕೊಂಡರು, ಕೆಲವರು ಪುಸ್ತಕಗಳಿಗಾಗಿ ಹೋದರು ಮತ್ತು ಇತರರು ಹಾಸಿಗೆಗಳ ಮೇಲೆ ಉರುಳಿದರು. ಇನ್ನು ಕೆಲವರು ಸೋಫಾಗಳ ಮೇಲೆ ಹಾರಿದರು. ನನ್ನ ಮೊದಲ ದಿನ ನೋಡಿದ ಸಾಧಾರಣ ಕೋಣೆ, ಮಕ್ಕಳ ನಗು ತುಂಬಿದ ಕೋಣೆಯಾಗಿ ಮಾರ್ಪಾಡಾಗಿತ್ತು. ಶೀಘ್ರದಲ್ಲೇ, ಗ್ರಂಥಾಲಯದ ಹೊಸ ಅವತಾರವು ಮಕ್ಕಳಿಗೆ ಕೂಡಿಬರಲು ಅತ್ಯಂತ ಜನಪ್ರಿಯ ಸ್ಥಳವಾಯಿತು.
ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ವಿಂಗಡಿಸುವುದು ನಮ್ಮ ಮುಂದಿನ ಕೆಲಸವಾಗಿತ್ತು. ಗ್ರಂಥಾಲಯದಲ್ಲಿ ಭಾರತೀಯ ಲೇಖಕರು ಬರೆದ ಪುಸ್ತಕಗಳು ಬಹಳ ಕಡಿಮೆ ಇರುವುದನ್ನು ನಾನು ಗಮನಿಸಿದೆನು. ಕಥಾ, ಪ್ರಥಮ, ತಾರಾ, ತುಲಿಕಾ ಮತ್ತು ಇತರ ಭಾರತೀಯ ಪ್ರಕಾಶಕರಿಂದ ಹಲವಾರು ಪುಸ್ತಕಗಳನ್ನು ಖರೀದಿಸಿದೆವು. ಮಕ್ಕಳಿಗೆ ಈ ಬಗ್ಗೆ ತಿಳಿಸಲು ಹೊಸ ಪುಸ್ತಕಗಳನ್ನು ಕಪಾಟಿನಲ್ಲಿ ಪ್ರದರ್ಶಿಸಲಾಯಿತು. ದಿನವೂ ಮಕ್ಕಳು ಮನಸಾರೆ ಬಂದು ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಓದಲು ಆಸಕ್ತಿಯಿಲ್ಲದವರು ಕೆಲವು ಆಟಿಕೆಗಳು ಮತ್ತು ಬೋರ್ಡ್ ಆಟಗಳನ್ನು ತೆಗೆದುಕೊಳ್ಳುತ್ತಿದ್ದರು. ನಿಧಾನವಾಗಿ ಮಕ್ಕಳು ಓದಲು ಇಷ್ಟಪಡುವ ಪುಸ್ತಕಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿದೆವು. ಕೆಲವು ದಿನಗಳಲ್ಲಿ ಶಿಕ್ಷಕರು ಅವರೊಂದಿಗೆ ಕುಳಿತು ಅವರು ಓದಿದ್ದನ್ನು ಚರ್ಚಿಸಿದರು. ಪಾತ್ರಗಳ ಕಥೆ ಹೇಳುವಿಕೆ, ನಾಟಕಗಳ ಮೂಲಕ ಜೀವಂತವಾಗಿ ಬಂದವು. ಕೆಲವೊಮ್ಮೆ ನಾವು ಇತರ ದೇಶಗಳ ಮತ್ತು ಖಂಡಗಳ ಬಗ್ಗೆ ತಿಳಿಯಲು ವಿಶ್ವ ಭೂಪಟ ಮತ್ತು ಗ್ಲೋಬ್ನೊಂದಿಗೆ ಕುಳಿತುಕೊಳ್ಳುತ್ತಿದ್ದೆವು.
ನಾವು ಹೊಸ ಗ್ರಂಥಾಲಯವನ್ನು ರಚಿಸಿ ಎರಡೂವರೆ ವರ್ಷಗಳು ಕಳೆದಿವೆ, ನಮ್ಮ ಗುರಿಯು ಸಾಮಾಜಿಕ ಸಂವಹನ ಮತ್ತು ಕುತೂಹಲದಿಂದ ನಡೆಸಲ್ಪಡುವ ಅನ್ವೇಷಣೆಯನ್ನು ಉತ್ತೇಜಿಸುವ ಹರ್ಷಚಿತ್ತದಿಂದ ಜಾಗವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿತ್ತು. ಓದುವ ಪ್ರೀತಿಯನ್ನು ಅಭಿವೃದ್ಧಿಪಡಿಸಲಾಯಿತು, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಪುಸ್ತಕಗಳು ಕಣ್ಮರೆಯಾಗುತ್ತಿವೆ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಂದ ಬದಲಾಯಿಸಲ್ಪಡುತ್ತವೆ, ಆದರೆ ನಮ್ಮ ಮಕ್ಕಳಲ್ಲಿ ಓದುವ ಪ್ರೀತಿಯನ್ನು ಹುಟ್ಟುಹಾಕುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ.