ನಮ್ಮ ತಂಡವನ್ನು ಭೇಟಿ ಮಾಡಿ

ನಮ್ಮ ನಿರ್ವಹಣೆ

ಕರ್ನಲ್ ಕೆ.ಕೃಷ್ಣ ಮೆನನ್ (ನಿವೃತ್ತ)

ನಿರ್ದೇಶಕರು, ಅಂಕುರ್

ಕರ್ನಲ್ ಮೆನನ್ ರವರು ಸೇನೆಯಲ್ಲಿ 3 ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ಸೈನಿಕ್ ಸ್ಕೂಲ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ.

ಅವರು ಪದಾತಿದಳದ ಬೆಟಾಲಿಯನ್ ಗೆ ನಿಯೋಜಿಸಲ್ಪಟ್ಟ ಮುಂಚೂಣಿಯ ಸೈನಿಕರಾಗಿದ್ದರು. ಅವರ 30 ವರ್ಷಗಳ ಸೇವೆಯಲ್ಲಿ ಭಾರತದ ಸಮಗ್ರ ಭೌಗೋಳಿಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಕರ್ನಲ್ ಮೆನನ್ ರವರು 2015 ರ ಕೊನೆಯಲ್ಲಿ ಅಂಕುರ್ ಸಂಸ್ಥೆಗೆ ಸೇರಿದ ಇವರು ಪ್ರಮುಖ ನಿರ್ದೇಶಕರಾಗಿ ಸಂಸ್ಥೆಯ ಹಡಗನ್ನು ಮುನ್ನೆಡೆಸುತ್ತಿದ್ದಾರೆ.

ಕಾರ್ಯಕ್ರಮವನ್ನು ಭೌಗೋಳಿಕವಾಗಿ ಹೊಸ ಎತ್ತರಕ್ಕೊಯ್ಯಲು ಮತ್ತು ವಿದ್ಯಾರ್ಥಿಗಳ ಅನನ್ಯ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಆರೈಕೆಯ ಮಾದರಿಯ ಪರಿಕಲ್ಪನೆಯನ್ನು ಮಾಡಿ ತಮ್ಮ ಸೇವೆಯನ್ನು ಮೀಸಲಿಟ್ಟಿದ್ದಾರೆ. ಶಿಕ್ಷಣದಲ್ಲಿ ಅಸಮಾನತೆಯನ್ನು ಪರಿಹರಿಸಲು ಅವರು ಸಾಮಾಜಿಕ ಜವಾಬ್ದಾರಿಯುತ ನಾಯಕನಾಗಿ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ. ಜೊತೆಗೆ ಮಕ್ಕಳಲ್ಲಿ ಬದ್ಧತೆ, ಗುರಿ ಆಧಾರಿತ ನಡವಳಿಕೆ, ಪೂರ್ವಭಾವಿ ಗುಣಗಳನ್ನು ತರುವ ಉತ್ತಮ ಉದ್ದೇಶವನ್ನು ಹೊಂದಿರುತ್ತಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವ ಇವರು ಅಂಕುರ್ ಸಂಸ್ಥೆಗೆ ಹೊಸ ಆಯಾಮವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಜೀವನದ ಪ್ರತಿ ಹಂತಕ್ಕೂ ಬೇಕಾದ ಅಗತ್ಯತೆಗಳಿಗೆ ಸ್ಪಂದಿಸುತ್ತಾರೆ. ಈ  ಮೂಲಕ ತಮ್ಮ ಶಿಕ್ಷಣ ಸಮಾನತೆಗೆ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವ ಗುರಿ ಮತ್ತು ರಚನಾತ್ಮಕ ಪರಿಕಲ್ಪನೆಯ ಮಾದರಿಯನ್ನು ಹೊಂದಿರುತ್ತಾರೆ. 

ಜೆನ್ನಿಫರ್ ಎಸ್. ಗೋಮ್ಸ್

ಪ್ರಾಂಶುಪಾಲರು, ಅಂಕುರ್
ಜೆನ್ನಿಫರ್ ರವರು ಮಕ್ಕಳೊಂದಿಗೆ 28 ವರ್ಷಗಳ ಕೆಲಸದ ಅನುಭವದಲ್ಲಿ 14 ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು 14 ವರ್ಷಗಳ ಕಾಲ ಅಂಕುರ್ ಸಂಸ್ಥೆಯಲ್ಲಿ ವಿದ್ಯಾರ್ಥಿ ನಿಲಯದ ನಿರ್ವಹಣೆ ಮಾಡುವ ಅನುಭವವನ್ನು ಹೊಂದಿದ್ದು ವೃತ್ತಿಪರರಾಗಿದ್ದಾರೆ. ತಮ್ಮ ಕೌಶಲ್ಯ ಮತ್ತು ಗುಣಾತ್ಮಕ ಪ್ರತಿಭೆಯಿಂದ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಪೋಷಿಸುವಲ್ಲಿ ಉತ್ಸುಕರಾಗಿದ್ದಾರೆ. ಅಂಕುರ್ ನಲ್ಲಿ 2009 ರಿಂದ ತಮ್ಮ ಕಾರ್ಯವೈಖರಿಯಿಂದ ಧನಾತ್ಮಕ ಪ್ರಭಾವವು ಮಕ್ಕಳ ಜೀವನಕ್ಕೆ ಬೇಕಾದ ಅತ್ಯದ್ಭುತ ಮೌಲ್ಯಗಳನ್ನು ಬೆಳಸುವುದರ ಮೂಲಕ ಸಂಸ್ಥೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವುದು ಸಂಸ್ಥೆಯ ಹೆಮ್ಮೆಯಾಗಿದೆ.

ಸುನೀತಾ ಪೀಟರ್

ಉಪ ಪ್ರಾಂಶುಪಾಲರು, ಶೈಕ್ಷಣಿಕ ವಿಭಾಗ, ಅಂಕುರ್
ಸುನೀತಾ ಪೀಟರ್ ಅವರು ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಸೇಂಟ್ ಜೋಸೆಫ್ ಸ್ನಾತಕೋತ್ತರ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಇವರ ವೃತ್ತಿ ಜೀವನದ ಮೊದಲ ಐದು ವರ್ಷಗಳು ಐ.ಟಿ ಉದ್ಯಮದಲ್ಲಿ ಪ್ರಾರಂಭವಾಯಿತು. ಆನಂತರ ಅವರು 2003 ರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಕರೆಯನ್ನು ಕಂಡುಕೊಂಡರು. ಈ ಎರಡು ದಶಕಗಳಲ್ಲಿ ಅವರು ಕೆಲವು ಅದ್ಭುತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾರ್ಯನಿರ್ವಹಿಸಿ ಪ್ರಗತಿಯನ್ನು ಸಾಧಿಸಿದ್ದಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವ ಸುನೀತರವರು, ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಅಂಕುರ್ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಹಾಗೂ ಶೈಕ್ಷಣಿಕ ಸಾಮರ್ಥ್ಯದಲ್ಲಿ ಪರಿವರ್ತನೆ ತರುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ

ರೇಣುಕಾ ಕೆ.ವಿ

ಹಿರಿಯ ಆಡಳಿತಾತ್ಮಕ ಅಧಿಕಾರಿ, ಅಂಕುರ್
ರೇಣುಕಾರವರು ಏಳು ವರ್ಷಗಳ ಕಾಲ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಪರವಾನಗಿ ವಿಭಾಗದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಪ್ರೊಡಾಟ್ ಐಟಿ ಸೊಲ್ಯುಷನ್ಸ್, ನೋಬಲ್ ಮ್ಯಾನೇಜ್ ಮೆಂಟ್ ಸೆರ್ವಿಸಸ್ ಮತ್ತು ಸ್ಟಾರ್ ವೆಂಡ್ ನಲ್ಲಿ ಕೆಲಸ ಮಾಡುವಾಗ ಅವರು ನಿರ್ವಾಹಕರಾಗಿ ತಮ್ಮ ಕೌಶಲ್ಯಗಳನ್ನು ಅರಿಯಲು ಮತ್ತು ಅಭಿವೃದ್ಧಿಪಡಿಸಲು ಉತ್ತಮ ವೇದಿಕೆಯಾಗಿ ಬಳಸಿಕೊಂಡರು. ಆದರೆ ಅವರ ಸಾಮಾಜಿಕ ಕಾಳಜಿ ಮತ್ತು ಲೋಕೋಪಕಾರದ ಮನೋಭಾವನೆ ಅವರನ್ನು ಅಂಕುರ್ ನಲ್ಲಿ ಹೊಸ ಉತ್ಸಾಹ ಮತ್ತು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಮಾಡಿತು. ಕಳೆದ 14 ವರ್ಷಗಳಿಂದ ಈ ಸಂಸ್ಥೆಯೊಂದಿಗಿನ ಅವರ ಬಾಂಧವ್ಯ ಅವಿಸ್ಮರಣೀಯ. ಮುಂಬರುವ ವರ್ಷಗಳಲ್ಲಿಯೂ ಉತ್ತಮ ಸಮಾಜಕ್ಕೆ ಬೇಕಾಗುವ ಸತ್ಪ್ರಜೆಗಳನ್ನು ನೀಡುವ ಸೇವೆಯಲ್ಲಿ ಅಂಕುರ್ ನೊಂದಿಗೆ ಕೈ ಜೋಡಿಸಿರುತ್ತಾರೆ.

Col. K. Krishna Menon

Director, Ankur
Col. Menon comes with over 3 decades of experience in the army. He is an alumni of Sainik School, National Defence Academy and Indian Military Academy. He’s been a frontline soldier having been commissioned into an infantry battalion and has been exposed to the entire geographical landscape of India over his 30 years of service. Col.Menon joined Ankur at the end of 2015 and has been steering the Ankur Flagship program ever since.

Ms.Sunitha Peter

Vice Principal-Academics, Ankur
Although Sunitha’s first five years of her career began in the Customer Services domain of the IT industries, she found her calling in the Education Industry in 2003. She is an alumna of Maharani’s Science College and St. Joseph’s PostGraduate Centre, Bangalore University. In two decades as an Educator, she has progressed in a few wonderful institutions in various prominent roles. Throughout a decade of her journey at Ankur, Sunitha has been instrumental in bringing transformation in student potential through Academics and Intellectual development.

Ms. Jennifer S. Gomes

Vice Principal – Child Welfare, Ankur
Jennifer is a dedicated professional with a total of 28 years of working experience with children, 14 years as a teacher and 14 years working in the capacity of hostel management. Having an extensive range of skills and qualities, she is passionate about nurturing the holistic development of children. Since 2009, her commitment for the cause of Ankur has been adding tremendous value to the lives of many children.

Ms. Renuka K V

Senior Administrative Officer
Renuka began her career working in the Medical Licensing department of the Karnataka Medical Council for seven years. She started to understand and hone her skills as an administrator while working for Prodat IT Solutions, Noble Management Services and Star Vend. But she found her passion and zeal for philanthropy in Ankur, which has kept her relationship with this organisation alive and continuous for the past 14 years. She wishes to be part of the Ankur family and its journey towards achieving a better society for years to come.

ನಮ್ಮ ಧರ್ಮದರ್ಶಿಗಳು

ಶ್ರೀಮತಿ. ಕುಮಾರಿ ಶಿಬುಲಾಲ್

ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ

ಶ್ರೀಯುತ. ಗೌರವ್ ಮಂಚಂದ

ಧರ್ಮದರ್ಶಿ

ಶ್ರೀಮತಿ. ಆಶಾ ಥಾಮಸ್

ಧರ್ಮದರ್ಶಿ

ಶ್ರೀಯುತ. ಎಸ್.ಡಿ.ಶಿಬುಲಾಲ್

ಖಾಯಂ ಧರ್ಮದರ್ಶಿ

ಶ್ರೀಯುತ. ಶ್ರೇಯಸ್ ಶಿಬುಲಾಲ್

ಧರ್ಮದರ್ಶಿ

ಶ್ರೀಮತಿ. ಅಪರ್ಣಾ ಗೋಯೆಂಕಾ

ಧರ್ಮದರ್ಶಿ

ಶ್ರೀಮತಿ. ಶೃತಿ ಶಿಬುಲಾಲ್

ಖಾಯಂ ಧರ್ಮದರ್ಶಿ

ಶ್ರೀಮತಿ ಭೈರವಿ ಮಧುಸೂಧನ್ ಶಿಬುಲಾಲ್

ಧರ್ಮದರ್ಶಿ

ಪ್ರಶಂಸನಾ ಬರವಣಿಗೆಗಳು

ಸುಪರ್ಣಾ ಚಟರ್ಜಿ
ಸುಪರ್ಣಾ ಚಟರ್ಜಿ ಮಾಜಿ ಪ್ರಾಂಶುಪಾಲರು, ಅಂಕುರ್
Read More
ಅಂಕುರ್ ನಲ್ಲಿ ನಾನು ಪ್ರಾಂಶುಪಾಲಳಾಗಿದ್ದ ಅವಧಿಯಲ್ಲಿ ಸಂಸ್ಥೆಯ ಪಠ್ಯಕ್ರಮ ಮತ್ತು ಕಾರ್ಯಯೋಜನೆಯನ್ನು ರೂಪಿಸುವ ಸುಯೋಗವನ್ನು ಪಡೆದಿದ್ದೆನು. ಅಂಕುರ್ ನ ಮಕ್ಕಳು ಸುಸಜ್ಜಿತ ಮತ್ತು ಸುರಕ್ಷಿತವಾದ ಪರಿಸರದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಉತ್ತಮವಾದ ಅವಕಾಶವನ್ನು ಪಡೆದಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ. ಅಂಕುರ್ ಹಲವಾರು ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಕಲ್ಪಿಸುವ ಅತ್ಯುತ್ತಮ ವಿದ್ಯಾಸಂಸ್ಥೆಯಾಗಿ ಖ್ಯಾತಿ ಪಡೆಯಲಿ ಎಂಬುದು ನನ್ನ ಹಾರೈಕೆಯಾಗಿದೆ. ನನಗೆ ಒಂದು ಸದಾವಕಾಶ ನೀಡಿದ ಈ ಸಂಸ್ಥೆಗೆ ಹೃದಯ ಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ.
ಜೆನ್ನಿಫರ್ ಎಸ್. ಗೋಮ್ಸ್
ಜೆನ್ನಿಫರ್ ಎಸ್. ಗೋಮ್ಸ್ ಪ್ರಾಂಶುಪಾಲರು, ಅಂಕುರ್
Read More
"ಉತ್ತಮ ಶಿಕ್ಷಕರು ಉತ್ತಮ ಬಾಂಧವ್ಯ ಮತ್ತು ಸ್ನೇಹಯುತ ಸಂಪರ್ಕದ ಮೇಲೆ ತಮ್ಮ ದೃಷ್ಟಿಕೋನವನ್ನು ಕೇಂದ್ರಿಕರಿಸುತ್ತಾರೆಯೇ ಹೊರತು ಅನುಸರಣೆಯ ಮೇಲಲ್ಲ". ಅಂಕುರ್ ಎಂದರೆ ನನಗೆ ಸರ್ವಸ್ವವೂ. ಅಂಕುರ್ ನನ್ನ ಪಾಲಿಗೆ ಒಂದು ದೊಡ್ಡ ಕುಟುಂಬವಿದ್ದಂತೆ. ಇಲ್ಲಿ ನಾನು ಉತ್ತಮ ಆರೈಕೆ ಮಾಡುವ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಅಂಕುರ್ ಉತ್ತಮ ಬಾಂಧವ್ಯದ ಅತ್ಯಂತ ಕಾಳಜಿಯುಳ್ಳ, ತುಂಟತನದ ಮತ್ತು ಮುಗ್ಧ ಮನಸ್ಸಿನ ಮಕ್ಕಳನ್ನು ಹೊಂದಿರುವ ಅದ್ಭುತ ಪರಿವಾರವಾಗಿದೆ. ಮಕ್ಕಳಷ್ಟೇ ಅಲ್ಲದೇ ಪ್ರತಿಯೊಬ್ಬ ಸಿಬ್ಭಂದಿಯೂ ಸಹ ಮನೆಯಿಂದ ದೂರವಿದ್ದರೂ, ಮನೆಯಂತೆ ಭಾಸವಾಗುವ ಅಂಕುರ್ ನ ಉತ್ತಮ ಪರಿಸರ, ಆಹ್ಲಾದಕರ ವಾತಾವರಣ ಉತ್ತಮ ಅನುಭವವನ್ನು ನೀಡುತ್ತದೆ. ಮಕ್ಕಳಿಂದ ಹಿಡಿದು ಸಿಬ್ಬಂದಿಯವರೆಗೆ ಪ್ರತಿಯೊಬ್ಬರಿಗೂ ಅತ್ಯಂತ ಗೌರವ, ಪ್ರೀತಿ ಮತ್ತು ಕಾಳಜಿಯನ್ನು ನೀಡುವ ಅದ್ಭುತ ಸ್ಥಳವಾಗಿದೆ. ಪ್ರತಿಯೊಬ್ಬರನ್ನೂ ತುಂಬಾ ಆದರದಿಂದ ನಡೆಸಿಕೊಳ್ಳುತ್ತಾರೆ. ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಅಂಕುರ್ ಸದಾ ಶ್ರಮಿಸುತ್ತದೆ. ಮುಗ್ಧ ಮಕ್ಕಳಿಗಾಗಿ ಉತ್ಸಾಹದಿಂದ ಸೇವೆ ಮಾಡಲು ನನಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಇಲ್ಲಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕೊಡುಗೆ ನೀಡಲು ಒಂದು ಸುವರ್ಣಾವಕಾಶ ನಮ್ಮದಾಗಿದೆ. ಅಂಕುರ್ ನೋಡಲು ತುಂಬಾ ಸರಳ ಮತ್ತು ಸುಲಭ ಎಂದು ತೋರಿದರೂ, ಇಲ್ಲಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದು ನನಗೆ ಆನಂದ ಮತ್ತು ತೃಪ್ತಿಯನ್ನು ನೀಡುತ್ತದೆ. ಅಂಕುರ್‌ ನಾನು ಕನಸು ಕಂಡ ಸ್ಥಳವಾಗಿದೆ. ಇದು ನಾನು ಸ್ವರ್ಗಕ್ಕೆ ಇಳಿದಂತೆ, ನನ್ನ ಸುತ್ತಲೂ ಎಲ್ಲವನ್ನೂ ಹೊಂದಿರುವುದರಿಂದ ನನಗೆ ಆನಂದವನ್ನು ನೀಡುತ್ತದೆ. ಅಂಕುರ್ ನನಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಅಂಕುರ್ ನನ್ನ ಮನೆ, ನನ್ನ ಕೆಲಸ ಮತ್ತು ನನ್ನ ಕುಟುಂಬ. ನಾನು ನಾನಾಗಿರಬಹುದಾದ ಸ್ಥಳ ಇದು."
ಸುನೀತಾ ಪೀಟರ್
ಸುನೀತಾ ಪೀಟರ್ ಉಪ ಪ್ರಾಂಶುಪಾಲರು, ಶೈಕ್ಷಣಿಕ ವಿಭಾಗ, ಅಂಕುರ್
Read More
ಅಂಕುರ್ ನನ್ನ ಜೀವನದಲ್ಲಿ ಒಂದು ವಿಶೇಷ ಕರೆಯಾಗಿದೆ. ಇಲ್ಲಿ ಮುಗ್ಧ ಮನಸ್ಸಿನ ಜೀವಗಳಿಗೆ ಸೇವೆ ಸಲ್ಲಿಸಲು ಒಂದು ಸುಂದರ ಅವಕಾಶ ನನಗೆ ಲಭಿಸಿದೆ. ಇಲ್ಲಿನ ಮಕ್ಕಳ ಸಂಭಾವ್ಯ ಪರಿವರ್ತನೆಗೆ ಕೊಡುಗೆ ನೀಡುತ್ತಿರುವುದಕ್ಕಾಗಿ ಹೆಮ್ಮೆ ಪಡುತ್ತೇನೆ. ಅಂಕುರ್ ನ ಭಾಗವಾಗಿ ಕಾರ್ಯನಿರ್ವಹಿಸುವುದು ನನ್ನ ಸೌಭಾಗ್ಯ ಎಂದೇ ಹೇಳಬಹುದು. ಈ 10 ವರ್ಷಗಳಲ್ಲಿ ಮಕ್ಕಳ ಕಲಿಕಾ ವಿಕಸನ ಮತ್ತು ಬೌದ್ಧಿಕ ಬೆಳವಣಿಗೆಗೆ ನನ್ನ ಶಕ್ತಿಮೀರಿ ಸೇವೆ ಸಲ್ಲಿಸಲು ಪ್ರಯತ್ನಿಸಿರುತ್ತೇನೆ. ನಾನು ಹೆಚ್ಚೆಚ್ಚು ಸೇವೆ ಸಲ್ಲಿಸಲು ಮತ್ತು ಸಂಸ್ಥೆಯ ಉದ್ದೇಶದೊಂದಿಗೆ ಪ್ರತಿಧ್ವನಿಸಲು ನನ್ನ ಸ್ವಂತ ಶಕ್ತಿಯನ್ನು ಕಂಡುಕೊಂಡಿದ್ದೇನೆ. ಈ ಮಕ್ಕಳು ವಿಕಸನಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿರುವುದು ಆನಂದದಾಯಕ ಅನುಭವವಾಗಿದೆ. ನಾನು ಅಂಕುರ್ ನ ಭಾಗವಾಗಿದ್ಧೇನೆ ಮತ್ತು ಖಂಡಿತವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇನೆ. ಅಂಕುರ್ ನನ್ನ ಮನೋಭಾವ, ನನ್ನ ಜೀವನ ಶೈಲಿಯಾಗಿದೆ. ಅಂಕುರ್ ನನ್ನ ಜೀವನವನ್ನು ಸಂಪೂರ್ಣ ಸಮೃದ್ಧಿಗೊಳಿಸಿದೆ. ನನಗೆ ಅಂಕುರ್ ಕುಟುಂಬದ ಭಾಗವಾಗಲು ಅವಕಾಶವನ್ನು ನೀಡಿದ್ದಕ್ಕಾಗಿ ನಾನು ತುಂಬಾ ಋಣಿಯಾಗಿದ್ದೇನೆ.
Previous
Next